ವೈಫಲ್ಯ ಮೆಟ್ಟಿನಿಂತ ಜೆಸ್ಸಿಕಾ ಕಾಕ್ಸ್
ಜೀವನದಲ್ಲಿ ಹುಟ್ಟು ಉಚಿತ, ಸಾವು ಖಚಿತ ಎಂಬ ಮಾತು ನೂರಕ್ಕೆ ನೂರಷ್ಟು€ ಸತ್ಯಹುಟ್ಟಿದಾಗಿನಿಂದ ಮನುಷ್ಯರು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಗುಣಗಳನ್ನು ಸಾಧಿಸಲು ಪ್ರಯತ್ನ ಮಾಡುತ್ತಿರುತಾನೆ. ಅದರಲ್ಲಿ ಕೆಲವೊಂದು ಪ್ರಯತ್ನಗಳು ಸಫಲವಾದರೆ ಮತ್ತೆ ಕೆಲವು ವಿಫಲವಾಗುತ್ತವೆ. ಆದರೆ ಮನುಷ್ಯನು ವಿಫಲ ಪ್ರಯತ್ನಗಳಿಗೆ ತಲೆಕೆಡಿಸಿಕೊಳ್ಳದೆ ಅವುಗಳನ್ನು ಸಫಲಗೊಳಿಸುವತ್ತ ತನ್ನ ಗಮನವನ್ನು ವಹಿಸಬೇಕು.. ಬುದ್ಧನ ಮಾತಿನಂತೆ ನಿನ್ನೆಯ ಬಗ್ಗೆ ಯೋಚಿಸಿ ನಾಳೆಯನ್ನು ಹಾಳುಮಾಡಬೇಡಿ, ಇವತ್ತಿನ ದಿನವನ್ನು ಸರಿಯಾಗಿ ಬಳಿಸಿಕೊಳ್ಳುವ ಮೂಲಕ ಮುನ್ನಡೆವ ದಾರಿಯನ್ನು ಹುಡಕಬೇಕು. ಮನುಷ್ಯನ ಸಹಜಗುಣ ಗೆದ್ದಾಗ ಸಂಭ್ರಮಿಸುವುದು ಮತ್ತು ಸೋತಾಗ ಮೂಲೆಯಲ್ಲಿ ಕುಳಿತುಕೊಂಡು ಜೀವನವೇ ಇಷ್ಟು ಎಂದು ತನ್ನನ್ನೇ ತಾನು ತೆಗಳಿಕೊಳ್ಳುವುದು, ಇದು ನಮ್ಮ ಸಮಸ್ಯೆಗೆ ಪರಿಹಾರವೇ? ಅದರ ಬದಲು ನಮ್ಮ ಮೇಲೆ ನಾವು ನಂಬಿಕೆಯಿಟ್ಟ ಆತ್ಮವಿಶ್ವಾಸದಿಂದ ಕೆಲಸಗಳನ್ನು ಮಾಡುವ ಮೂಲಕ ನಮ್ಮ ಗುರಿಯನ್ನು ಸಾಧಿಸಬಹುದು. ಆದರೆ ಕೆಲವರಿಗೆ ಆತ್ಮವಿಸ್ವಾಸವೆಂಬುದು ಕಡಿಮೆಯಿರುತ್ತದೆ. ಇದಕ್ಕೆ ಕಾರಣ ಆ ವ್ಯಕ್ತಿಯ ಬೆಳೆಯುತ್ತಿರುವ ಪರಿಸರ ಕಾರಣವಿರಬಹುದು? ನಮ್ಮ ಸುತ್ತ ಬರೀ ನಮ್ಮನ್ನು ತೆಗಳುವ ಮತ್ತು ನಾವು ಮಾಡುವ ಕೆಲಸವನ್ನು ಅಪಹಾಸ್ಯ ಮಾಡುವ ಅಥವಾ ನಮ್ಮ ಆತ್ಮಶಕ್ತಿಯನ್ನು ಕುಗ್ಗಿಸುವಂತಹ ಜನರು ಇರುತ್ತಾರೆ. ಹಾಗಾಗಿ ಅಂತಹ ಸಂದರ್ಭಗಳಲ್ಲಿ ನಾವು ಆಯ್ಕೆ ಮಾಡಿಕೊಳ್ಳುವಂತಹ ಜನರು ನಮ್ಮನ್ನು ಪ್ರೋತ್ಸಾಹಿಸುವಂತವರಾಗಿರಬೇಕು. ಕೆಲವರು ಸ್ವತಃ ಪ್ರೇರೇಪಿತರಾದರೆ, ಮತ್ತೆ ಕೆಲವರು ಬೇರೆಯವರ ಮಾತುಗಳಿಂದ ಪ್ರೇರೇಪ್ತಗೊಳ್ಳುತ್ತಾರೆ. ಹಾಗಾಗಿ ನಮ್ಮ ಆಯಕೆ ಸರಿಯಾಗಿರಬೇಕು. ನೂರು ಜನರನ್ನು ಜೊತೆಯಲ್ಲಿಟ್ಟು ಕೊಳ್ಳುವುದಕ್ಕಿಂತ ನಮ್ಮನ್ನು ಸದಾ ಪ್ರೋತ್ಸಾಹಿಸುವಂತಹ ಒಬ್ಬರನ್ನು ಆಯ್ಕೆಮಾಡಿಕೊಳ್ಳುವುದು ನಮ್ಮ ಸಾಧನೆಗೆ ಮುನ್ನಡೆಯಾಗಿರುತ್ತದೆ. ನಮ್ಮಲ್ಲಿರುವ ಭಯಕ್ಕಿಂತ ನಮ್ಮಲ್ಲಿರುವ ನಂಬಿಕೆ ದೊಡ್ಡದಾಗಿದ್ದಾಗಲೇ ನಾವು ಜೀವನದಲ್ಲಿ ಸಾಧಿಸಲು ಸಾಧ್ಯವಾಗುತ್ತದೆ. ಜೀವನದಲ್ಲಿ ಒಂದು ನಿರ್ದಿಷ್ಟ ಗುರಿಯನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ.
ಅಬ್ದುಲ್ ಕಲಾಂರ ಮಾತಿನಂತೆ ಕನಸುಕಾಣಬೇಕು ಮತ್ತು ಅದನ್ನು ನನಸು ಮಾಡುವ ಪ್ರಯತ್ನವಿರಬೇಕು ಎಂಬಂತೆ ನಮ್ಮ ಗುರಿಸಾಧನೆಗೆ ಬೇಕಾದ ಪ್ರಯತ್ನಗಳನ್ನು ಆತ್ಮವಿಸ್ವಾಸದಿಂದ ಮಾಡುವ ಮೂಲಕ ನಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬೇಕು. ಈ ಸಮಯದಲ್ಲಿ ಸಾವನ್ನು ಪಡೆಯಲು ಸಾವಿರ ದಾರಿಗಳಿವೆ, ಆದರೆ ಬದುಕನ್ನು ಕಂಡುಕೊಳ್ಳಲು ಇರುವ ದಾರಿ ಒಂದೇ ಅದುವೇ ಆತ್ಮವಿಸ್ವಾಸ ಇಂತಹ ಒಂದು ಮಾತಿಗೆ ಉದಾಹರಣೆಯಾಗಿ ಜೆಸ್ಸಿಕಾ ಕಾಕ್ಸ್ ಎಂಬ ಮಹಿಳೆಯ ಉದಾಹರಣೆಯನ್ನು ನೀಡಬಹುದು. ಅಮೆರಿಕಾದ ಆರಿಝೋನಾದಟ ಸ್ಕನ್ ಎಂಬಲ್ಲಿಯ ನಿವಾಸಿಯಾಗಿರುವ ಈ ಮಹಿಳೆಯು ಹುಟ್ಟುವಾಗಲೇ ಎರಡು ಕೈಗಳು ಇಲ್ಲದೆ ಜನಿಸಿದಳು. ಎಟಡು ಕೈಗಳಿರುವ ನಾವೇ ಏನೂ ಮಾಡಲು ಯೋಚಿಸದಿರುವಾಗ ಇನ್ನು ಕೈಗಳಿಲ್ಲದ ಇವರನ್ನು ನೋಡಿ ಜನರು ಆಡಿಕೊಳ್ಳುವುದು. ಸಹಜ ಆದರೆ ಇವರ ಆತ್ಮಶಕ್ತಿಯ ಮುಂದೆ ಅವರ ಚುಚ್ಚುಮಾತುಗಳು ಅವರ ಕಿವಿಗೆ ಬೀಳದಾಯಿತು. ಅವರು ತಮ್ಮ ಕಾಲುಗಳನ್ನೇ ತಮ್ಮ ಕೈಗಳಾಗಿ ಬಳಸಲು ಪ್ರಾರಂಭಿಸಿದರು. ಎಲ್ಲಾ ಮಕ್ಕಳಿಗೂ ತಾಯಿಯೇ ಮೊದಲ ಗುರು ಎಂಬಂತೆ ಅವರ ಅಮ್ಮನ ಪ್ರೋತ್ಸಾಹದಿಂದ 5ನೇ ವಯಸ್ಸಿಗೆ ಈಜುವುದನ್ನು ಕಲಿತರು. ಮತ್ತು ಎಂಟನೇ ತರಗತಿಗೆ ಡ್ಯಾನ್ಸ್ ಕ್ಲಾಸ್ಗೆ ಸೇರಿದರು. ಅಷ್ಟೇ ಅಲ್ಲದೆ ಈಕೆ ಎಟಿಎ (American Taekwondo Association ) ಬ್ಲಾಕ್ ಬೆಲ್ಟ್ ಗಿಟ್ಟಿಸಿ ಕೊಂಡ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಮೂರು ವರುಷಗಳು ಸತತ ಪ್ರಯತ್ನದಿಂದ 2008ರಲ್ಲಿ ವಿಮಾನದ ಪರವನ್ನಾಗೆಯನ್ನು ಪಡೆದುಕೊಂಡು 10000 ಅಡಿ ಎತ್ತರದಲ್ಲಿ ಲೈಟ್ಸ್ಟೋರ್ಟ್ ವಿಮಾನಗಳನ್ನು ಹಾರಿಸುವ ಮೂಲಕ ವಿಶ್ವದಲ್ಲೇ ಕೈಗಳಿಲ್ಲದೆ ವಿಮಾನವನ್ನು ಚಲಾಯಿಸಿದ ಮೊದಲ ಪೈಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಇಷ್ಟೇ ಅಲ್ಲದೇ ತಮ್ಮ ಕಾಲುಗಳಿಂದಲೇ ಪಿಯಾನೋ ನುಡಿಸುವುದು ಮತ್ತು ಸ್ಖಪ್ ಡ್ರೈವಿಂಗೆ ಎಂಬ ಸಾಹಸಮಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅರಿಝೋನಾದ ವಿಶ್ವವಿದ್ಯಾಲಯದಿಂದ ಮನೋವಿಜ್ಙಾನದಲ್ಲಿ ಪದವಿಯನ್ನು ಪಡುದುಕೊಂಡಿರುವ ಇವರು ಇಂದು ಜಗತಿನಾದ್ಯಂತ ಸ್ಫೂರ್ತಿದಾಯಕ ಭಾಷಣಗಳನ್ನು ಮಾಡುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ. ಅಂಗವಿಲಕತೆ ಎಂಬುದು ಕೇವಲ ದೇಹಕ್ಕೆ ಮಾತ್ರ ಮನಸಿಗಲ್ಲ ಎಂಬ ಮಾತಿನಂತೆ ಇವರು ಎಷ್ಟೋ ನಮ್ಮಂತಹ ಜನರಿಗೆ ಸ್ಪೂರ್ತಿಯಾಗಿದ್ದಾರೆ. ನಾವೆಲ್ಲ ಬೇರೆಯವರು ಆಡುವ ಮಾತುಗಳಿಂದ ನಮ್ಮ ಜನಸು ಮತ್ತು ಗುರಿಗಳನ್ನು ಅಷ್ಟಕ್ಕೆ ಬಿಟ್ಟುಬಿಡುತ್ತೇವೆ. ಹಾಗಾಗಿ ಹೆದರಿ ಬದುಕಬೇಕಾಗಿರುವುದು ನಮ್ಮನ್ನು ಸೃಷ್ಟಿಸಿದ ಭಗವಂತನಿಗೆ ಹೊರತು ಕಾಣದೆ ಬೆನ್ನಹಿಂದೆ ಮಾತನಾಡುವ ಜನಕಲ್ಲ ಆದ್ದರಿಂದ ಎಲಲಿ ಹುಟ್ಟಬೇಕು ಅನ್ನೋದು ನಮ್ಮ ಕೈಯಲ್ಲಿ ಇರುವುದಿಲ್ಲ. ಆದರೆ ಎಲ್ಲಿಗೆ ಮುಟ್ಟಬೇಕು ಅನ್ನೋದು ಮಾತ್ರ ನಮ್ಮ ಕೈಯಲ್ಲಿ ಇರುತ್ತದೆ. ಹಾಗಾಗಿ ನಮ್ಮಲ್ಲಿ ಆತ್ಮವಿಶ್ವಾಸ ಒಂದಿದ್ದರೆ ಎಂತಹ ಪರಿಸ್ಥಿತಿಯಲ್ಲೂ ನಾವು ತಲೆಎತ್ತಿ ನಿಲ್ಲಬಹುದು. ಎಂಬ ಮಾತಿನಂತೆ ನಮ್ಮ ಜೀವನದಲ್ಲಿ ನಾವು ಅಂದುಕೊಂಡ ಗುರಿಯನ್ನು ಆತ್ಮವಿಶ್ವಾಸದಿಂದ ಪ್ರಯತ್ನ ಮಾಡುವ ಮೂಲಕ ಈಡೇರಿಸಿಕೊಳ್ಳೋಣ. ಒಂದು ಬಾರಿ ಮೇಲೆ ಏರಿದರೆ ಮತ್ತೊಂದು ಬಾರಿ ಕೆಳಗೆ ಇಳಿಯಲೇಬೇಕು. ಕೆಲವು ಬಾರಿ ಸಿಹಿಯ ಸವಿದರೆ ಮತ್ತೊಂದು ಬಾರಿ ಕಹಿಯ ಸವಿಯಲೇಬೇಕು. ಜೀವನ ಒಂದು ಬಾರಿ ಸಾಕು ಎನಿಸಿದರೆ, ನಮ್ಮ ಮುಂದಿರುವ ಸಾಧಕರ ಛಲ ನೋಡಿ ಕಲಿಯಬೇಕು. ಬದುಕುವುದು ಹೇಗೆ ಎಂದು ತಿಳಿದು ಕೊಂಡರೆ ಹಠವ ಬಿಡದೆ ಗುರಿಯ ಕಡೆ ನುಗ್ಗಬೇಕು. ಮನಸಲ್ಲಿ ಛಲ , ಬಲವಿರಲು ಸಾಧಿಸಲು ಭಯವೇತಕೆ.
ಅವರಿಂದ ಕಲಿಯಬೇಕಾದ ಪಾಠಗಳು
👉 ಅಂಗವೈಕಲ್ಯ ದೇಹಕ್ಕೆ ಮಾತ್ರ — ಮನಸ್ಸಿಗೆ ಅಲ್ಲ
👉 ಪರಿಸ್ಥಿತಿ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ
👉 ಆತ್ಮವಿಶ್ವಾಸ ಇದ್ದರೆ ಅಸಾಧ್ಯವೂ ಸಾಧ್ಯ
😔 ನಾವು ಮಾಡುವ ದೊಡ್ಡ ತಪ್ಪು
ನಾವು ಬಹಳ ಬಾರಿ ಏನು ಮಾಡುತ್ತೇವೆ ಗೊತ್ತಾ?
👉 ಜನರು ಏನು ಹೇಳುತ್ತಾರೆ ಎಂದು ಹೆದರುತ್ತೇವೆ
👉 ಸೋಲಿನಿಂದ ಹೆದರುತ್ತೇವೆ
👉 ಪ್ರಯತ್ನ ಮಾಡುವುದನ್ನೇ ಬಿಟ್ಟುಬಿಡುತ್ತೇವೆ
ಆದರೆ ಸತ್ಯ ಏನೆಂದರೆ —
👉 ನಮ್ಮನ್ನು ನಿಲ್ಲಿಸುವುದು ಹೊರಗಿನ ಜನರಲ್ಲ
👉 ನಮ್ಮೊಳಗಿನ ಭಯ
🌈 ಜೀವನದ ನಿಜವಾದ ಸತ್ಯ
👉 ನಾವು ಎಲ್ಲ ಹುಟ್ಟಬೇಕು ಅನ್ನೋದು ನಮ್ಮ ಕೈಯಲ್ಲಿ ಇಲ್ಲ
👉 ಆದರೆ ಎಲ್ಲಿಗೆ ತಲುಪಬೇಕು ಅನ್ನೋದು ನಮ್ಮ ಕೈಯಲ್ಲಿ ಇದೆ
ಜೀವನದಲ್ಲಿ ಏರುಪೇರುಗಳು ಸಹಜ:
- ಒಂದು ದಿನ ಗೆಲುವು
- ಇನ್ನೊಂದು ದಿನ ಸೋಲು
- ಒಂದು ದಿನ ಸಂತೋಷ
- ಇನ್ನೊಂದು ದಿನ ದುಃಖ
ಆದರೆ ಅದೇ ಜೀವನದ ಸೌಂದರ್ಯ.
💡 ಯಶಸ್ಸಿನ ಸೂತ್ರ
ಯಶಸ್ಸು ಸಾಧಿಸಲು ಬೇಕಾದವು:
👉 ಆತ್ಮವಿಶ್ವಾಸ
👉 ಗುರಿ
👉 ನಿರಂತರ ಪ್ರಯತ್ನ
👉 ಸರಿಯಾದ ಮನಸ್ಥಿತಿ
🧠 ಮನಸ್ಸಿನ ಶಕ್ತಿ
ಮನಸ್ಸಿನಲ್ಲಿ ಛಲ ಇದ್ದರೆ —
👉 ಯಾವುದೇ ಸಮಸ್ಯೆ ದೊಡ್ಡದಾಗುವುದಿಲ್ಲ
ಮನಸ್ಸಿನಲ್ಲಿ ಭಯ ಇದ್ದರೆ —
👉 ಸಣ್ಣ ಸಮಸ್ಯೆಯೂ ದೊಡ್ಡದಾಗಿ ಕಾಣುತ್ತದೆ
ಆತ್ಮವಿಶ್ವಾಸದ ಕೊರತೆಯ ಕಾರಣಗಳು
ಬಹಳಷ್ಟು ಜನರು “ನನಗೆ ಆತ್ಮವಿಶ್ವಾಸ ಕಡಿಮೆ” ಎಂದು ಹೇಳುತ್ತಾರೆ.
ಆದರೆ ಯಾಕೆ?
👉 1. ನೆಗೆಟಿವ್ ಪರಿಸರ
ನಮ್ಮ ಸುತ್ತಲಿನ ಜನರು ನಮ್ಮ ಮನಸ್ಸನ್ನು ಪ್ರಭಾವಿತ ಮಾಡುತ್ತಾರೆ.
“ನೀನು ಮಾಡೋಕಾಗಲ್ಲ” ಎಂದು ಹೇಳುವವರು ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಾರೆ.
👉 2. ವಿಫಲತೆಯ ಭಯ
ಒಮ್ಮೆ ಸೋತರೆ, ಮತ್ತೆ ಪ್ರಯತ್ನಿಸಲು ಹೆದರುತ್ತೇವೆ.
👉 3. ಹೋಲಿಕೆ
ನಾವು ನಮ್ಮನ್ನು ಇತರರ ಜೊತೆ ಹೋಲಿಸುತ್ತೇವೆ.
ಇದರಿಂದ ನಮ್ಮ ಮೇಲೆ ನಂಬಿಕೆ ಕಡಿಮೆಯಾಗುತ್ತದೆ.
👉 4. ಸ್ವಯಂ ಸಂಶಯ
“ನಾನು ಇದಕ್ಕೆ ಯೋಗ್ಯನಾ?” ಎಂಬ ಅನುಮಾನ.
🚀 ಆತ್ಮವಿಶ್ವಾಸ ಹೆಚ್ಚಿಸುವ ಸರಳ ವಿಧಾನಗಳು
ಆತ್ಮವಿಶ್ವಾಸ ಒಂದು ದಿನದಲ್ಲಿ ಬರೋದಿಲ್ಲ. ಅದು ನಿಧಾನವಾಗಿ ಬೆಳೆಯುತ್ತದೆ.
✅ 1. ಸಣ್ಣ ಗುರಿಗಳನ್ನು ಇಟ್ಟುಕೊಳ್ಳಿ
ಸಣ್ಣ ಗುರಿಗಳನ್ನು ಸಾಧಿಸಿದಂತೆ ಆತ್ಮವಿಶ್ವಾಸ ಹೆಚ್ಚುತ್ತದೆ.
✅ 2. ನೆಗೆಟಿವ್ ಜನರಿಂದ ದೂರವಿರಿ
ನಿಮ್ಮನ್ನು ತಗ್ಗಿಸುವವರನ್ನು ತಪ್ಪಿಸಿ.
✅ 3. ನಿಮ್ಮ ಶಕ್ತಿಗಳನ್ನು ಗುರುತಿಸಿ
ನಿಮ್ಮಲ್ಲಿರುವ ಪ್ರತಿಭೆಗಳನ್ನು ಗಮನಿಸಿ.
✅ 4. ವಿಫಲತೆಯನ್ನು ಒಪ್ಪಿಕೊಳ್ಳಿ
ಸೋಲು ಒಂದು ಪಾಠ.
✅ 5. ಪಾಸಿಟಿವ್ ಯೋಚನೆ
ನಿಮ್ಮ ಮನಸ್ಸಿಗೆ ಒಳ್ಳೆಯ ಮಾತುಗಳನ್ನು ಹೇಳಿಕೊಳ್ಳಿ.
ಆತ್ಮವಿಶ್ವಾಸ ಮತ್ತು ಗುರಿ
ಗುರಿಯಿಲ್ಲದ ಜೀವನಕ್ಕೆ ಅರ್ಥವಿಲ್ಲ.
ಆತ್ಮವಿಶ್ವಾಸ ಇದ್ದರೂ ಗುರಿ ಇರಬೇಕು.
👉 ಗುರಿ + ಆತ್ಮವಿಶ್ವಾಸ = ಯಶಸ್ಸು
ನೀವು ಏನು ಸಾಧಿಸಬೇಕು ಎಂದು ಸ್ಪಷ್ಟವಾಗಿರಬೇಕು.
🧠 ಮನಸ್ಸಿನ ಶಕ್ತಿ
ನಮ್ಮ ಮನಸ್ಸೇ ನಮ್ಮ ಜೀವನವನ್ನು ನಿರ್ಧರಿಸುತ್ತದೆ.
👉 ನೀವು “ನಾನು ಮಾಡಬಹುದು” ಎಂದು ಯೋಚಿಸಿದರೆ — ನೀವು ಮಾಡುತ್ತೀರಿ
👉 ನೀವು “ನಾನು ಮಾಡೋಕಾಗಲ್ಲ” ಎಂದು ಯೋಚಿಸಿದರೆ — ನೀವು ನಿಲ್ಲುತ್ತೀರಿ
😔 ನಮ್ಮ ದೊಡ್ಡ ತಪ್ಪು
ನಾವು ಬಹಳ ಬಾರಿ:
- ಜನರ ಮಾತು ಕೇಳುತ್ತೇವೆ
- ನಮ್ಮ ಕನಸುಗಳನ್ನು ಬಿಟ್ಟುಬಿಡುತ್ತೇವೆ
ಆದರೆ ಸತ್ಯ:
👉 ಜನರು ನಿಮ್ಮ ಜೀವನವನ್ನು ಬದುಕುವುದಿಲ್ಲ
👉 ನೀವು ಬದುಕಬೇಕು
🌈 ಜೀವನ ಪಾಠ
👉 ನಾವು ಎಲ್ಲ ಹುಟ್ಟಬೇಕು ಅನ್ನೋದು ನಮ್ಮ ಕೈಯಲ್ಲಿ ಇಲ್ಲ
👉 ಆದರೆ ಎಲ್ಲಿಗೆ ತಲುಪಬೇಕು ಅನ್ನೋದು ನಮ್ಮ ಕೈಯಲ್ಲಿ ಇದೆ
🏁 ಸಾರಾಂಶ
ಆತ್ಮವಿಶ್ವಾಸ ಇಲ್ಲದಿದ್ದರೆ ಜೀವನ ನಿಂತಂತೆಯೇ.
ಆತ್ಮವಿಶ್ವಾಸ ಇದ್ದರೆ ಜೀವನ ಬದಲಾಗುತ್ತದೆ.
👉 ನಿಮ್ಮ ಮೇಲೆ ನಂಬಿಕೆ ಇಡಿ
👉 ಪ್ರಯತ್ನ ಮಾಡಿರಿ
👉 ಸೋಲಿನಿಂದ ಕಲಿಯಿರಿ
ಆತ್ಮವಿಶ್ವಾಸವೇ ಯಶಸ್ಸಿನ ಕೀಲಿಕೈ.