ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸು
ಸಮಾಜದಲ್ಲಿ ಇರವಂತಹ ಮನುಷ್ಯರಾದ ನಾವುಗಳು ಒಬ್ಬರ ಮೇಲೆ ಒಬ್ಬರು ಅವಲಂಬಿತರಾಗಿರುತ್ತೇವೆ. ನಾವು ಎಷ್ಟೇ ದೂರವಿದ್ದರು ಪ್ರತಿಯೊಬ್ಬರ ಸಹಕಾರ ನಮಗೆ ಬೇಕೇ ಬೇಕು. ಕೆಲವರು ಹೇಳಬಹುದು ನಾನು ಯಾರೊಂದಿಗು ಸೇರುವುದಿಲ್ಲ ನನಗೆ ಯಾರ ಅವಶ್ಯಕತೆಯು ಬೇಡವೆಂದು ಹೇಳುತ್ತಿರುತ್ತಾರೆ. ಆದರೆ ಯೋಚಿಸಿ ನೋಡಿದರೆ ಯಾರು ಸಹ ಏಕಾಂಗಿಯಾಗಿ ಇರಲು ಸಾಧ್ಯವಿಲ್ಲ. ನಮ್ಮ ಜೀವನದಲ್ಲಿ ಮನೆಯೇ ನಮ್ಮ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರುವಾಗಿರುತ್ತಾರೆ. ನಮ್ಮ ಬಾಲ್ಯದಿಂದಲೂ ನಾವು ಅನೇಕ ಜನರನ್ನು ನಾವು ನೋಡಿಕೊಂಡು ಬೆಳೆದಿರುತ್ತೇವೆ. ಮತ್ತು ಅವರ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಪಾಲಿಸಿಕೊಂಡು ಬಂದಿರುತ್ತೇವೆ. ಶಾಲೆಯಲ್ಲಿ ಶಿಕ್ಷಕರ ಮಾತುಗಳನ್ನು ಕೇಳುವ ನಾವು ಮನೆಯಲ್ಲಿ ನಮ್ಮ ಪೋಷಕರು ಏನೇ ಹೇಳಿದರು ಅದನ್ನು ನಾವು ಪಾಲಿಸಲು ನಿರಾಕರಿಸುತ್ತೇವೆ. ಏಕೆಂದರೆ ನಮಗೆ ನಮ್ಮ ಶಿಕ್ಷಕರು ಹೇಳಿರುವುದು ನಿಜವೆಂದು ಮತ್ತು ಅವರು ಅಪಾರ ವಿಚಾರಗಳನ್ನು ತಿಳಿದುಕೊಂಡಿರುತ್ತಾರೆಂದು ನಂಬಿಕೊಂಡಿರುತ್ತೇವೆ. ಕೇವಲ ಶಿಕ್ಷಕರಲ್ಲದೆ, ಸಮಾಜದಲ್ಲಿ ಅನೇಕ ಕ್ಷೇತ್ರಗಳಲ್ಲಿ ಸಾಧಿಸುತ್ತಿರುವ ಅನೇಕ ಆದರ್ಶ ವ್ಯಕ್ತಿಗಳನ್ನು ನಮ್ಮ ಜೀವನದಲ್ಲಿ ಅವರನ್ನು ಆದರ್ಶ ವ್ಯಕ್ತಿಗಳಾಗಿ ಸ್ವೀಕರಿಸಿ ಅವರ ಮೌಲ್ಯಗಳನ್ನು ಪಾಲಿಸುತ್ತಿರುತ್ತೇವೆ. ಅಂತಹ ಸಂದರ್ಭದಲ್ಲಿ ಅವರು ತಮ್ಮ ನಡೆ ನುಡಿಗಳನ್ನು ಮತ್ತು ತಮ್ಮ ಜೀವನ್ ಶೈಲಿಗಳನ್ನು ಬಹಳ ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು. ಇಲ್ಲವಾದರೆ ಸಮಾಜದಲ್ಲಿ ಅವರು ಕಷ್ಟ ಪಟ್ಟುಗಳಿಸಿದಂತಹ ಅವರು ಕೀರ್ತೀ ಒಂದೇ ನಿಮಿಷದಲ್ಲಿ ಹಾಳಾಗಿ ಬಿಡುತ್ತದೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ ಹಾಗೂ ರಾಜಕೀಯ ನಾಯಕರುಗಳನ್ನು ತಮ್ಮ ಆದರ್ಶ ವ್ಯಕ್ತಿಗಳಾಗಿ ಸ್ವೀಕರಿಸಿ ಅವರ ಹಿಂಬಾಲಕರಾಗುತ್ತದ್ದಾರೆ. ಪ್ರತಿಯೊಬ್ಬ ನಾಯಕನಿಗೂ ಅವರದೇ ಆದ ಸಂಘ ಸಂಸ್ಥೆಗಳು ಇರುವುವು. ಅವರು ತಮ್ಮ ಜೀವನವನ್ನು ನಡೆಸಲು ಯಾವುದೋ ಕೆಲಸ ಕಾರ್ಯಗಳಲ್ಲಿ ತೊಡಗಿ ಕೊಂಡಿರುತ್ತಾರೆ. ಅದಲ್ಲದೇ ಸಮಾಜದಲ್ಲಿ ತಮ್ಮನ್ನು ತಾವು ನಾಯಕರನ್ನಾಗಿ ಗುರುತಿಸಿಕೊಂಡಿರುತ್ತಾರೆ. ನಾಯಕರಾಗಿ ಗುರುತಿಸಿ ಕೊಂಡ ಮೇಲೆ ಅವರು ಮಾಡುವ ಪ್ರತಿಯೊಂದು ಕೆಲಸಕ್ಕೂ ಅವರೇ ಜವಾಬ್ದಾರಿಯಾಗಿರುತ್ತಾರೆ. ಅದು ಒಳ್ಳೇಯದೇ ಆಗಲಿ ಅಥವಾ ಸಮಾಜಬಾಹಿರ ಕೆಲಸಗಳಾಗಲೀ ಅದಕ್ಕೆ ಆ ಗುಂಪಿನ ನಾಯಕನೇ ನೇರ ಹೊಣೆ ತಮ್ಮ ಬೆಂಬಲಿಗರು , ಅಭಿಮಾನಿಗಳು ಮಾಡುವಂತಹ ಕೆಟ್ಟ ಕೆಲಸಗಳಿಗೆ ಅವರ ನೆಚ್ಚಿನ ನಾಯಕ ಬೆಲೆ ತೆರುತ್ತಿರುವುದನ್ನು ನಾವು ಇಂದಿನ ದಿನಗಳಲ್ಲಿ ಕಾಣಬಹುದು. ಇದಕ್ಕೆ ಹೋಲಿಕೆ ಎಂಬಂತೆ ನೃಗ ಚಕ್ರವರ್ತಿಯ ಕತೆ ನೆನಪಾಗುತ್ತದೆ. ನೃಗ ರಾಜನೆಂಬ ಒಬ್ಬ ಚಕ್ರವರ್ತಿ ತನ್ನ ಆಸ್ಥಾನದಲ್ಲಿ ಇರುವಾಗ ತಮ್ಮ ಗುರುಗಳ ಸಲಹೆಯಂತೆ ಅವನು ಪ್ರತಿ ವರುಷವು ದಾನ ಧರ್ಮವನ್ನು ಮಾಡಿಕೊಂಡು ಬರುತ್ತಿದ್ದನು. ಅಂತೆಯೇ ಅವನು ದಾನ ಧರ್ಮವನ್ನು ಮಾಡುವ ಮೂಲಕ ಊರಿನಲ್ಲಿ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದ್ದನು. ಪ್ರತಿವರುಷದಂತೆ ಅವನು ತನ್ನಲ್ಲಿದ್ದ ಹಸುಗಳನ್ನು ದಾನ ಮಾಡುವ ಮೂಲಕ ಬ್ರಾಹ್ಮಣರ ಆಶೀರ್ವಾದವನ್ನು ಪಡೆದುಕೊಂಡನು. ಎಲ್ಲವನ್ನು ದಾನ ಮಾಡಿ ತನ್ನ ಆಸ್ಥಾನದಲ್ಲಿ ಇರುವಾಗ ಅವನ ಬಳಿ ಪರ್ವತನೆಂಬ ಬ್ರಾಹ್ಮಣ ದಾನವನ್ನು ಕೇಳಿಕೊಂಡು ಬಂದನು. ರಾಜನು ಅವನ ಬಳಿ ಕೊಡಲು ಏನು ಇಲ್ಲದ ಕಾರಣ ತನ್ನ ಸೇವಕರಿಗೆ ಹುಡಕಲು ತಿಳಿಸಿದಾಗ ತನ್ನ ಕೊಟ್ಟಿಗೆಯಲ್ಲಿ ಒಂದೇ ಒಮದು ಹಸುವಿರುವುದು ಕಂಡು ಬಂದು ಅದನ್ನು ಪರ್ವತನಿಗೆ ದಾನವಾಗಿ ನೀಡಿದನು. ದಾನವನ್ನು ಪಡೆದ ಪರ್ವತನು ಊರಿನಲ್ಲಿ ಮತ್ತಾವುದೋ ಕೆಲಸವಿದಿದ್ದರಿಂದ ಆ ಹಸುವನು ಅಲ್ಲಿಯೇ ಒಂದು ಮರಕ್ಕೆ ಕಟ್ಟಿಹಾಕಿ ಹೋಗುತ್ತಾನೆ. ಅನಂತರ ರಾಜನ ಆಸ್ಥಾನಕ್ಕೆ ಅನಾರತ ಎಂಬ ಬ್ರಾಹ್ಮಣ ದಾನವನ್ನು ಕೇಳಿಕೊಂಡು ಬರುತ್ತಾನೆ. ದಾನವನ್ನು ಕೇಳಿಕೊಂಡು ಬಂದವನನ್ನು ಬರಿಗೈಯಲ್ಲಿ ಹೇಗೆ ಕಳುಹಿಸುವುದು ಎಂದು ಭಾವಿಸಿ ನೃಗ ರಾಜನು ತನ್ನ ಸೇವಕರಿಗೆ ಏನಾದರು ಉಳಿದಿದೆಯೇ ಎಂದು ನೋಡಿಕೊಂಡು ಬರಲು ತಿಳಿಸುತ್ತಾನೆ. ಅದರಂತೆ ಸೇವಕರು ಊರಿನಲ್ಲಿ ಹುಡುಕುತ್ತಿರುವಾಗ ಮರದ ಬಳಿ ಹಸುವನ್ನು ಕಟ್ಟಿ ಹಾಕಿರುವುದು ಅವರ ಕಣ್ಣಿಗೆ ಬೀಳುತ್ತದೆ. ರಾಜನನ್ನು ಸಂತೃಪ್ತಿ ಪಡಿಸಲು ಸೇವಕರು ಅದು ಯಾರದೆಂದು ವಿಚಾರಿಸದೆ ಅದನ್ನು ತೆಗೆದುಕೊಂಡು ಬಂದು ರಾಜನ ಬಳಿ ನಿಲ್ಲಿಸಿ ಅದನ್ನು ಅನಾರತ ಎಂಬ ಬ್ರಾಹ್ಮಣನಿಗೆ ದಾನವಾಗಿ ಕೊಡಿಸುತ್ತಾರೆ. ರಾಜನಿಗೆ ಸದ್ಯ ಬಂದವನನ್ನು ಸಂತೋಷದಿಂದ ಕಳುಹಿಸಿದ ತೃಪ್ತಿ. ಅನಾರತನು ಸಹ ಹಸುವನ್ನು ಪಡೆದುಕೊಂಡು ಸಂತೋಷದಿಂದ ಮನಗೆ ಬಂದು ಹಸುವನ್ನು ತನ್ನ ಮನೆಯಲ್ಲಿ ಕಟ್ಟಿಹಾಕುತ್ತಾನೆ. ಇತ್ತ ಕೆಲಸದ ನಿಮಿತ್ತ ಹೋಗಿದ್ದ ಪರ್ವತನು ಕೆಲಸ ಮುಗಿಸಿ ಬಂದು ನೋಡಿದರೆ ತಾನು ಹಸುವನ್ನು ಕಟ್ಟಿ ಹಾಕಿದ ಜಾಗದಲ್ಲಿ ಹಸುವಿಲ್ಲದಿರುವುದನ್ನು ಕಂಡು ಗಾಬರಿಯಾಗುತ್ತಾನೆ. ಹಸುವನ್ನು ಹುಡುಕುತ್ತ ಊರಿನ ಬೀದಿಗಳಲ್ಲಿ ಮತ್ತು ಮನೆಗಳಲ್ಲಿ ಅಲೆಯುತ್ತಿರುತ್ತಾನೆ. ಕೊನೆಗೆ ಆ ಹಸುವು ಅನಾತನ ಮನೆಯಲ್ಲಿರುವುದನ್ನು ನೋಡಿ ಅನವಿಗೆ ಬಹಳ ಸಂತೋಷ ಮತ್ತು ಕೋಪ ಬರುತ್ತದೆ. ತನಗೆ ನೀಡಿದ ಹಸುವನ್ನು ಇವನೇಗೆ ತೆಗೆದುಕೊಂಡು ಬಂದನು ಎಂದು ಅನಾರತನ ಜೊತೆ ಮಾತಿಗಿಳಿಯುತ್ತಾನೆ. ಅನಾರತನು ಈ ಹಸುವು ತನಗೆ ಮಹಾರಾಜರು ದಾನವಾಗಿ ನೀಡಿದ್ದು ಎಂದು ಹೇಳುತ್ತಾನೆ. ಅದಕ್ಕೆ ಪರ್ವತನು ನನಗೂ ಸಹ ಈ ಹಸುವು ಮಹಾರಾಜರೇ ದಾನವಾಗಿ ನೀಡಿದ್ದು ಎಂದು ತಿಳಿಸುತ್ತಾನೆ. ಇಬ್ಬರು ತಮ್ಮ ಮಾತಿನಲ್ಲಿ ಸೋಲದೇ ಕೊನೆಗೆ ಮಹಾರಾಜನನ್ನೇ ಕೇಳೋಣವೆಂದು ಕೊಂಡು ಅರಮನೆಯತ್ತ ಹೊರಡುತ್ತಾರೆ. ಅರಮನೆಯ ಕಾವಲುಗಾರನಿಗೆ ಹೇಳಿ ತಕ್ಷಣ ರಾಜನನ್ನು ಬೇಟಿ ಮಾಡ ಬೇಕೆಂದು ಕೇಳಿಕೊಳ್ಳುತ್ತಾರೆ. ದಾನವನ್ನು ಪಡೆದು ಈ ಬ್ರಾಹ್ಮಣರು ಮತ್ತೆ ದುರಾಸೆಯಿಂದ ದಾನವನ್ನು ಪಡೆಯಲು ರಾಜನ ಬಳಿ ಬಂದಿರ ಬೇಕೆಂದು ಅವನು ರಾಜನಿಗೆ ವಿಷಯವನ್ನೇ ತಿಳಿಸುವುದಿಲ್ಲ. ಇತ್ತ ಎರಡು ತಾಸು ಕೆಳೆದರು ಯಾವುದೇ ಸೂಚನೆ ಸಿಗದಿರುವುದನ್ನು ಕಂಡು ಇಬ್ಬರು ಬ್ರಾಹ್ಮಣರಿಗು ಕೋಪ ಬಂದು ದಾನ ನೀಡಿದ ವಸ್ತುವನ್ನೇ ಮತ್ತೆ ದಾನವನ್ನಾಗಿ ನೀಡಿ ನಮಗೆ ಮೋಸಮಾಡಿದ್ದಾರೆಂದು ಭಾವಿಸಿಕೊಂಡು ನೃಗರಾಜ ಓತಿಕ್ಯಾತನಾಗಲಿ ಎಂದು ಶಾಪವನ್ನು ಕೊಟ್ಟು ಬಿಡುತ್ತಾರೆ. ಇದನ್ನು ತಿಳಿದುಕೊಡ ನೃಗರಾಜನು ತಕ್ಷಣವೇ ಓಡಿ ಬಂದು ತನಗೆ ಈ ವಿಷಯವು ನನಗೆ ಅರಿವಿಲ್ಲದಂತಯೇ ನಡೆದು ಹೋಗಿದೆ. ಇದರಲ್ಲಿ ನನ್ನ ತಪ್ಪು ಏನು ಇಲ್ಲ. ದಯವಿಟ್ಟು ನೀವು ನೀಡಿದ ಶಾಪವನ್ನು ಹಿಂದಕ್ಕೆ ಪಡೆದು ನನ್ನನ್ನು ಮೊದಲಿನಂತೆಯೇ ಮನುಷ್ಯನನ್ನಾಗಿ ಮಾಡಿಬಿಡಿ ಎಂದು ಬ್ರಾಹ್ಮಣರನ್ನು ನಿವೇದಿಸಿ ಕೊಳ್ಳುತ್ತಾನೆ. ಆದರೆ ಕೊಟ್ಟ ಶಾಪವನ್ನು ಹಿಂಪಡೆಯಲು ಸಾಧ್ಯವಿಲ್ಲದರಿಂದ ಅದಕ್ಕೆ ಪರಿಹಾರವನ್ನು ಮಾತ್ರ ಸೂಚಿಸುತ್ತಾರೆ. ಮುದೊಂದು ಕಾಲದಲ್ಲಿ ಶ್ರೀ ಕೃಷ್ಣನು ಬಂದು ಇವನನ್ನು ಮುಟ್ಟಿದಾಗ ಈ ಓತಿಕ್ಯಾತನ ಜೀವನದಿಂದ ಮುಕ್ತಿ ದೊರೆಯುತ್ತದೆ ಎಂದು ಹೇಳಿ ಹೊರಡುತ್ತಾರೆ. ಹೀಗೆ ನೃಗ ರಾಜನು ತಾನು ಮಾಡದೆ ಇದ್ದ ತಪ್ಪಿಗೆ ಶಾಪವನ್ನು ಪಡೆಯಬೇಕಾಯಿತು. ಹೀಗೆ ನಮ್ಮ ಜೀವನದಲ್ಲೂ ಸಹ ನಾವು ಕೆಲವೊಮ್ಮೆ ನಾವು ಮಾಡದೆ ಇದ್ದ ತಪ್ಪಿಗೆ ಗುರಿಯಾಗಬೇಕಾಗುತ್ತದೆ. ಹಾಗಾಗಿ ನಾವು ನಮ್ಮ ಜೀವನದಲ್ಲಿ ಆಯ್ಕೆ ಮಾಡಿ ಕೊಳ್ಳುವಂತಹ ನಮ್ಮ ಬಳಗವನ್ನು ನಾವು ಬಹಳ ಎಚ್ಚರಿಕೆಯಿಂದ ನಾವು ಆರಿಸಿ ಕೊಳ್ಳ ಬೇಕು. ಇಲ್ಲವಾದಲ್ಲಿ ಅವರು ನಮಗೆ ಗೊತ್ತಿಲ್ಲದಂತೆ ಮಾಡಿದ ತಪ್ಪುಗಳಿಗೆ ನಾವು ಬೆಲೆತೆರ ಬೇಕಾಗುತ್ತದೆ. ಒಬ್ಬ ಉತಮ ನಾಯಕ ತಾನು ಮಾತ್ರ ಉತ್ತಮ ನಾಯಕನಾಗುವ ದಾರಿಯಲ್ಲಿ ನಡೆದರೆ ಸಾಲದು. ಅವನು ತನ್ನ ಜೊತೆ ಇರುವ ಇತರರನ್ನು ಸಹ ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸಿದಾಗ ಮಾತ್ರ ಒಬ್ಬ ಉತ್ತಮ ನಾಯಕನಾಗಲು ಸಾಧ್ಯ. ಜೀವನವೆಂಬುದು ನಮಗೆ ಬಹಳಷ್ಡನು ನೀಡಿದೆ. ಅದರಲ್ಲಿ ಬೇರೆಯವನ್ನು ನಮ್ಮ ಸ್ವಾರ್ಥಕ್ಕೆ ಉಪಯೋಗಿಸುವ ಬದಲು ಅವರನ್ನು ಒಳ್ಳೆಯ ಕೆಲಸಗಳಗೆ ಬಳಸಿಕೊಂಡು ನಮ್ಮ ಉತ್ತಮ ಸಮಾಜದ ಪ್ರಗತಿಗೆ ಶ್ರಮಿಸೋಣ.
ರಾಜೇಂದ್ರ. ಎಸ್
ಮಹದೇವಪುರ
Wowww 🎉👌🏻👌🏻
thank you